Thursday, October 23, 2014

ಸಾಕ್ಷರ ಶಿಬಿರ

        ಕಲಿಕೆಯಲ್ಲಿ ಹಿಂದುಳಿದ ಮಕ್ಕಳ  ಅಕ್ಷರಾಭ್ಯಾಸ ಗುರಿಯಾಗಿರಿಸಿಕೊಂಡು ಎಸ್. ಎಸ್. ಎ, ಡಯೆಟ್, ಜಿಲ್ಲಾ ಪಂಚಾಯತುಗಳು ಜಂಟಿಯಾಗಿ ಹಮ್ಮಿಕೊಂಡಿರುವ ಸಾಕ್ಷರಂ 14 ಪದ್ಧತಿಯ ಅಂಗವಾಗಿ ಸೃಜನಾತ್ಮಕ ಶಿಬಿರವು ಬೇಕೂರು ಸರಕಾರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ನಡೆಯಿತು. ಶಾಲಾ ಪಿ.ಟಿ.ಎ ಅಧ್ಯಕ್ಷರಾದ ಶ್ರೀ. ಮೊಹಮ್ಮದ್ ಅಂದು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಷಾದೇವಿ ಅಂತರ್ಜನಂ ಅಧ್ಯಕ್ಷತೆಯನ್ನು ವಹಿಸಿದರು.ಅಧ್ಯಾಪಕರಾದ ಶ್ರೀ ರಾಧಾಕೃಷ್ಣ ಬರ್ಲಾಯ ಅವರು ಸ್ವಾಗತಿಸಿ ಶ್ರೀ ಆಸಿಫ್ ಮೊಹಮ್ಮದ್ ವಂದಿಸಿದರು. ರಾಧಾಕೃಷ್ಣ ಬರ್ಲಾಯ,ಕುಮಾರಿ ಹೇಮಲತ, ಸುಮಿತ್ರ, ರಝಾಕ್, ಆಸಿಫ್ ಮೊಹಮ್ಮದ್ ಅಬ್ದುಲ್ ಲತೀಫ್ ಮುಂತಾದವರು ಶಿಬಿರಕ್ಕೆ ನೇತೃತ್ವವನ್ನು ನೀಡಿದರು.

No comments:

Post a Comment