Wednesday, October 22, 2014


ಶಾಲಾ ಯುವಜನೋತ್ಸವ



2014- 2015 ನೇಸಾಲಿನ ಬೇಕೂರು ಶಾಲಾ ಯುವಜನೋತ್ಸವವು ತಾರೀಕು 13. 10.2014 ಮತ್ತು 14.10.2014 ರಂದು ನಡೆಯಿತು. ವಾರ್ಡ್ ಮೆಂಬರ್ ಶ್ರೀಮತಿ ಸುಜಾತಾ ಶೆಟ್ಟಿಯವರು ಕಾಯ್ಯಕ್ರಮವನ್ನು ಉದ್ಘಾಟಿಸಿದರು.ಅತಿಥಿಗಳಾಗಿ ಭಾಗವಹಿಸಿದ SMC CHAIRMAN ಮೊಹಮ್ಮದ್ ಅಂದು, MPTA PRESIDENT ಶ್ರೀಮತಿ ಕುಬ್ರಾ ಮೊಹಮ್ಮದ್ ಮತ್ತು ಇತರ PTA ಸದಸ್ಯರು ಸಮಾರಂಭಕ್ಕೆ ಶುಭವನ್ನು ಹಾರೈಸಿದರು. ಈ ಸಂದರ್ಭದಲ್ಲಿ SSLC ಪರೀಕ್ಷೆಯಲ್ಲಿ ಅತ್ಯಧಿಕ ಅಂಕವನ್ನು ಗಳಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮವು ಮುಖ್ಯೋಪಾಧ್ಯಾಯಿನಿಯವರ ಸ್ವಾಗತದೊಂದಿಗೆ ಮುಂದುವರಿದು ಪ್ರಾಂಶುಪಾಲರ ಧನ್ಯವಾದದೊಂದಿಗೆ ಕೊನೆಗೊಂಡಿತು. ಎರಡು ದಿನಗಳ ವರೆಗೆ ಮುಂದುವರಿದ ಕಾರ್ಯಕ್ರಮವು ಆಕರ್ಷಕವಾಗಿತ್ತು. ಕಲಾ ಶಿಕ್ಷಕರಾದ ದಿನೇಶ್.ಕೆ.ವಿ. ಅವರು ಕಾರ್ಯಕ್ರಮದ ಕನ್ವೀನರ್ ಆಗಿದ್ದು ಕಾರ್ಯಕ್ರಮವು ವಿಜೃಂಭಣೆಯಿಂದ ಜರಗಿತು.

No comments:

Post a Comment